ಕರ್ನಾಟಕದ ರಾಯಚೂರಿನಿಂದ ಒಂದು ಪ್ರತಿಭೆ
ಕತ್ತಲೆಯಲ್ಲಿ ಕುಳಿತು ಪದಗಳಲ್ಲಿ ಮಲಗಿ ಪುಸ್ತಕದ ಮೂಲಕ ಏಳುವ ಕನಸ್ಸು ಹೊಂದಿದ ಕನ್ನಡ ಕಂದ!! ಭಾವನೆಯೇ ಜೀವನ, ಬದಲಾವಣೆಯೆ ಸ್ಥಿರತೆ ಎಂದು ಧೃಡವಾಗಿ ನಂಬಿದ ಜೀವ. ಕನಾ೯ಟಕ ರಾಜ್ಯ, ರಾಯಚೂರು ಜಿಲ್ಲೆಯ ಕಾಡ್ಲೂರು ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದರು. ಕಾಡ್ಲೂರು ಗ್ರಾಮದಿಂದ ಏಳು ಕಿಲೋ ಮೀಟರ್ ದೂರವಿರುವ ಶಕ್ತಿನಗರ ಎಂಬ ನಗರದಲ್ಲಿ ಕಳೆದ ೧೪ ವಷ೯ಗಳಿಯಿಂದ ಜೀವನ ಕಳೆಯುತ್ತಿದ್ದಾರೆ. ಜುಲೈ ೬ ೨೦೦೧ ರಂದು ತಂದೆ ತಿಮ್ಮಣ್ಣ ತಾಯಿ ಶಿವಮ್ಮ ಅವರ ಗಭ೯ದಲ್ಲಿ ಜನ್ಮತಾಳಿದರು. ತಮ್ಮ ವಿಧ್ಯಾಭ್ಯಾಸವನ್ನು ಡಿ.ಎ.ವಿ ಕನ್ನಡ ಮಾದ್ಯಮ ಶಾಲೆಯಲ್ಲಿ ಮುಗಿಸಿದರು. ತದ ನಂತರ ಮುಂದಿನ ಅಭ್ಯಾಸವನ್ನು ವಿಜ್ಞಾನ ವಿಭಾಗದಲ್ಲಿ ಜೆ.ಎಸ್.ಪಿ ಎಂಬ ಕಾಲೇಜಿನಲ್ಲಿ ಪೂಣ೯ಗೊಳಿಸಿದರು. ಇವುಗಳ ನಡುವೆ ಜೀವನ ಅವರನ್ನು ಬೇರೆದಾರಿ ಕಡೆಗೆ ಕರೆದೊಯಿತು ಬರವಣಿಗೆಯಲ್ಲಿ ಆಸಕ್ತಿ ಹೊಂದಿದ ಇವರು ಅದೇ ದಾರಿಯಲ್ಲಿ ಸಾಗತೊಡಗಿದರು ಹೇಳದೆ ಅದು ಅವರ ಕೈಹಿಡಿಯಿತು. ಸಾವಿರ ಕನಸ್ಸುಗಳೊಂದಿಗೆ ಜೀವನದ ಪಯಣ ನಡೆಸುತ್ತಿರುವರು…
ಭಾವನೆಗಳನ್ನು ಅಕ್ಷರಗಳಲ್ಲಿ ಹೇಳುವ ಅವ್ಯಾಸ ಹೊಂದಿದ ಕನ್ನಡದ ಕುವರಿ!!
ಜೀವನದಲ್ಲಿ ಎಲ್ಲವನ್ನು ಕಲಿಯದಿದ್ದರೂ ಏನಾದರು ಕಲಿಯಬೇಕು ಎಂಬ ಹಠವಿರುವ ಕನ್ನಡತಿ. ಪುಸ್ತಕವನ್ನು ಓದುವುದು ನೆಚ್ಚಿನ ಅವ್ಯಾಸ, ೭೫೦ ಕ್ಕೂ ಹೆಚ್ಚಿನ ಕವನಗಳನ್ನು, ೫ ಕ್ಕೂ ಹೆಚ್ಚು ಪುಸ್ತಕಗಳಾದ A treasure to behold, garden of thoughts, heart strings, Relations -the aroma of love and one side love ಎಂಬ ಆಂಗ್ಲಭಾಷೆಯ ಪುಸ್ತಕಗಳಲ್ಲಿ ಸಹಕವಿಯತ್ರಿಯಾಗಿ ನಮ್ಮ ಬರವಣಿಗೆಯನ್ನು ಅಂಚಿಕೊಂಡಿದ್ದಾರೆ. ಭಾವನೆಯ ಮಡಿಲಲ್ಲಿ (Story of a believer) ಎಂಬ ತಮ್ಮ ಜೀವನ ಆಧಾರಿತ ಪುಸ್ತಕ ಬರೆದಿದ್ದಾರೆ. ಇದು ಅವರ ೩ನೇ ಪುಸ್ತಕವಾಗಿದೆ.
ಪ್ರಸ್ತುತ ಶುಶ್ರೂಷಾ ವಿದ್ಯಾಥಿ೯ನಿ..